ಈ ಕಾರ್ಡ್ ನಿಮ್ಮ ಬಳಿ ಇದ್ದರೆ ಸರ್ಕಾರದಿಂದ ನಿಮಗೆ ತಿಂಗಳಿಗೆ ₹3000 ರೂಪಾಯಿಗಳವರೆಗೆ ಪೆನ್ಷನ್ ಸೇರಿದಂತೆ ಹಲವು ಪ್ರಯೋಜನಗಳು ದೊರೆಯುತ್ತವೆ. ಜೊತೆಗೆ ಉಚಿತ ವಿಮಾ ಸೌಲಭ್ಯವೂ ಲಭ್ಯ. ಹಾಗಾದರೆ ಈ ಕಾರ್ಡ್ ಏನು? 2026ರ ಅಪ್ಡೇಟ್ಗಳು ಏನು? ಇದಕ್ಕೆ ಹೇಗೆ ಅರ್ಜಿ ಸಲ್ಲಿಸಬಹುದು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳನ್ನು ಈ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ. ಲೇಖನವನ್ನು ಕೊನೆಯವರೆಗೆ ತಪ್ಪದೆ ಓದಿರಿ.
ಈ ಯೋಜನೆಯ ಮುಖ್ಯ ಉದ್ದೇಶ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸಹಾಯ ಮಾಡುವುದು ಮತ್ತು ಅವರ ಜೀವನಕ್ಕೆ ಭದ್ರತೆ ಒದಗಿಸುವುದಾಗಿದೆ. ಅಸಂಘಟಿತ ವಲಯದ ಕಾರ್ಮಿಕರು ಎಂದರೆ, ನಿಯಮಿತ ಆದಾಯವಿಲ್ಲದೆ ದಿನಗೂಲಿ ಅಥವಾ ಸಣ್ಣಪುಟ್ಟ ಕೆಲಸಗಳನ್ನು ಮಾಡುವವರು. ಇವರಿಗೆ ಕೆಲಸ ನಿಂತರೆ ಆದಾಯವೂ ನಿಂತುಹೋಗುತ್ತದೆ.
ಭಾರತದ ಆರ್ಥಿಕತೆಯ ಬೆನ್ನೆಲುಬಾಗಿರುವವರು ಅಸಂಘಟಿತ ವಲಯದ ಕಾರ್ಮಿಕರು. ರಸ್ತೆ ಬದಿಯ ವ್ಯಾಪಾರಿಗಳಿಂದ ಹಿಡಿದು ಡೆಲಿವರಿ ಬಾಯ್ಸ್ವರೆಗೆ ಅನೇಕರು ಯಾವುದೇ ಭವಿಷ್ಯ ಭದ್ರತೆ ಇಲ್ಲದೆ ಕೆಲಸ ಮಾಡುತ್ತಿದ್ದಾರೆ. ಇಂತಹ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಲು ಕೇಂದ್ರ ಸರ್ಕಾರ ‘ಇ-ಶ್ರಮ’ (e-Shram) ಯೋಜನೆಯನ್ನು ಜಾರಿಗೆ ತಂದಿದೆ.
ಈ ಯೋಜನೆ 2026ರಲ್ಲಿ ಹೊಸ ರೂಪ ಪಡೆದುಕೊಂಡಿದ್ದು, ವಿಶೇಷವಾಗಿ ಗಿಗ್ ವರ್ಕರ್ಸ್ (Gig Workers) ಮತ್ತು ಪ್ಲಾಟ್ಫಾರ್ಮ್ ಕಾರ್ಮಿಕರಿಗೆ ಇದು ಹೆಚ್ಚಿನ ಪ್ರಯೋಜನಕಾರಿಯಾಗಿದೆ.
ಯಾರು ಅರ್ಹರು?
- ಎಳ್ನೀರು ಮಾರುವವರು
- ಸಣ್ಣಪುಟ್ಟ ಕೆಲಸ ಮಾಡುವವರು
- ಕೂಲಿಕಾರ್ಮಿಕರು
- ಸ್ವಂತ ಸಣ್ಣ ವ್ಯವಹಾರ ಹೊಂದಿರುವವರು (ಆದಾಯ ಕಡಿಮೆ ಇರುವವರು)
- ವಾರ್ಷಿಕ ಆದಾಯ ₹1 ಲಕ್ಷಕ್ಕಿಂತ ಕಡಿಮೆ ಇರುವವರು
ಪ್ರಮುಖ ಪ್ರಯೋಜನಗಳು (Key Benefits):
- ವೃದ್ಧಾಪ್ಯ ಪಿಂಚಣಿ: 60 ವರ್ಷ ನಂತರ ಪ್ರತಿ ತಿಂಗಳು ₹3000 ಪಿಂಚಣಿ
- ಉಚಿತ ಅಪಘಾತ ವಿಮೆ:
- ಮರಣ ಅಥವಾ ಸಂಪೂರ್ಣ ಅಂಗವೈಕಲ್ಯಕ್ಕೆ ₹2 ಲಕ್ಷ
- ಭಾಗಶಃ ಅಂಗವೈಕಲ್ಯಕ್ಕೆ ₹1 ಲಕ್ಷ
- ಆರೋಗ್ಯ ಭದ್ರತೆ: ಆಯುಷ್ಮಾನ್ ಭಾರತ ಯೋಜನೆಗೆ ಲಿಂಕ್ ಆಗಿ ₹5 ಲಕ್ಷದವರೆಗೆ ಚಿಕಿತ್ಸೆ
- ಕುಟುಂಬಕ್ಕೆ ಭದ್ರತೆ: ಕಾರ್ಮಿಕರ ಮರಣದ ನಂತರ ಕುಟುಂಬಕ್ಕೆ ಪ್ರಯೋಜನಗಳು
2026ರ ಹೊಸ ಅಪ್ಡೇಟ್ಗಳು:
- ಸ್ವಿಗ್ಗಿ, ಜೊಮ್ಯಾಟೋ, ಓಲಾ, ಉಬರ್, ಅಮೆಜಾನ್ ಕಂಪನಿಗಳು ತಮ್ಮ ಕಾರ್ಮಿಕರನ್ನು ಜೂನ್ 21–22, 2026ರೊಳಗೆ ನೋಂದಾಯಿಸಬೇಕು
- ಕಂಪನಿಗಳು ತಮ್ಮ ವಾರ್ಷಿಕ ವಹಿವಾಟಿನ 1–2% ಹಣವನ್ನು ಕಾರ್ಮಿಕರ ಕಲ್ಯಾಣಕ್ಕೆ ನೀಡಬೇಕು
- ಕಾರ್ಮಿಕರು ಮೊಬೈಲ್ ಆಪ್ ಮೂಲಕ ತಮ್ಮ ಪ್ರಯೋಜನಗಳನ್ನು ರಿಯಲ್-ಟೈಮ್ನಲ್ಲಿ ಟ್ರ್ಯಾಕ್ ಮಾಡಬಹುದು
ಯಾರು ನೋಂದಾಯಿಸಿಕೊಳ್ಳಬಹುದು?
- 16 ರಿಂದ 59 ವರ್ಷದೊಳಗಿನ ಅಸಂಘಟಿತ ಕಾರ್ಮಿಕರು
- ಗಿಗ್ ವರ್ಕರ್ಸ್ (ಡೆಲಿವರಿ, ಡ್ರೈವರ್, ಫ್ರೀಲಾನ್ಸರ್)
- ಕೃಷಿ ಕಾರ್ಮಿಕರು, ಆಟೋ ಚಾಲಕರು, ಮನೆ ಕೆಲಸದವರು
- EPF/ESI ಸೌಲಭ್ಯ ಹೊಂದಿರುವವರು ಮತ್ತು ತೆರಿಗೆ ಪಾವತಿಸುವವರು ಅರ್ಹರಲ್ಲ
ಅರ್ಜಿಸಲ್ಲಿಸುವ ವಿಧಾನ (How to Apply):
- eshram.gov.in ವೆಬ್ಸೈಟ್ಗೆ ಭೇಟಿ ನೀಡಿ
- ಆಧಾರ್ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಬಳಸಿ OTP ಮೂಲಕ ಲಾಗಿನ್ ಮಾಡಿ
- ಬ್ಯಾಂಕ್ ಹಾಗೂ ಉದ್ಯೋಗ ವಿವರಗಳನ್ನು ಭರ್ತಿ ಮಾಡಿ
- ಇ-ಶ್ರಮ ಕಾರ್ಡ್ ಅನ್ನು ಡೌನ್ಲೋಡ್ ಮಾಡಿ

ಕೊನೆಯ ಮಾತು:
ಈ ಮಾಹಿತಿಯನ್ನು ತಿಳಿದುಕೊಳ್ಳುವುದು ಮಾತ್ರವಲ್ಲ, ಇತರರೊಂದಿಗೆ ಹಂಚಿಕೊಳ್ಳುವುದು ಸಹ ಒಂದು ಸೇವೆ. ಅಗತ್ಯವಿರುವ ಕಾರ್ಮಿಕರಿಗೆ ಈ ಮಾಹಿತಿ ತಲುಪಿಸಿ, ಅವರ ಭವಿಷ್ಯ ಭದ್ರವಾಗಲು ನೆರವಾಗಿರಿ.

W/O Shivaruda chinnigana Hosahalli village Bandura varagerahalli Dakale Channapatna Taluka VTC Banduru valagerehell post Aralalasandra Disstriict Ramnagar State karnataka pin code 562138