PM ವಿಶ್ವಕರ್ಮ ಯೋಜನೆ: ಅರ್ಹತೆಗಳು, ಬೇಕಾಗುವ ದಾಖಲೆಗಳು ಮತ್ತು ಅರ್ಜಿ ಸಲ್ಲಿಸುವ ಹಂತಗಳು

ಕೇಂದ್ರ ಸರ್ಕಾರದ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಇಲಾಖೆಯ ಪ್ರಕಾರ, 2023ರ ಸೆಪ್ಟೆಂಬರ್‌ನಲ್ಲಿ ಜಾರಿಗೊಂಡ ಪಿಎಂ ವಿಶ್ವಕರ್ಮ ಯೋಜನೆಯಡಿ 21 ಲಕ್ಷಕ್ಕೂ ಹೆಚ್ಚು ಮಂದಿ ಸಾಲ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ಭಾರತದಲ್ಲಿ ಸಾಮಾನ್ಯವಾಗಿರುವ ಒಟ್ಟು 18 ಬಗೆಯ ವೃತ್ತಿ ಅಥವಾ ಕಸುಬುಗಳಲ್ಲಿ ತೊಡಗಿಸಿಕೊಂಡಿರುವವರು ಈ ಯೋಜನೆಯಡಿ ಸಾಲ ಪಡೆಯಬಹುದು.

ಈ ಯೋಜನೆಯ ವಿಶೇಷತೆಗಳಾಗಿ ಫಲಾನುಭವಿಗಳಿಗೆ ಐಡಿ ಕಾರ್ಡ್, ಕೌಶಲ್ಯಾಭಿವೃದ್ಧಿ ತರಬೇತಿ, ಟೂಲ್‌ಕಿಟ್ ನೆರವು, ಸಾಲ ವಿತರಣೆ, ಡಿಜಿಟಲ್ ವ್ಯವಹಾರಗಳಿಗೆ ಪ್ರೋತ್ಸಾಹ ಹಾಗೂ ಮಾರ್ಕೆಟಿಂಗ್ ಬೆಂಬಲ ದೊರೆಯುತ್ತದೆ. ಬ್ಯಾಂಕ್‌ಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು, ಸ್ಮಾಲ್ ಫೈನಾನ್ಸ್ ಬ್ಯಾಂಕ್‌ಗಳು, ಕೋ-ಆಪರೇಟಿವ್ ಬ್ಯಾಂಕ್‌ಗಳು, ನಾನ್-ಬ್ಯಾಂಕಿಂಗ್ ಫೈನಾನ್ಸ್ ಕಂಪನಿಗಳು ಹಾಗೂ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಈ ಯೋಜನೆಯಡಿ ಸಾಲ ವಿತರಿಸುತ್ತವೆ.

ಯಾರು ಈ ಯೋಜನೆಯ ಪ್ರಯೋಜನ ಪಡೆಯಬಹುದು?

ಕಾರ್ಪೆಂಟರ್‌ಗಳು, ದೋಣಿ ತಯಾರಕರು, ಕಮ್ಮಾರರು, ಕಬ್ಬಿಣ ಮತ್ತು ತಾಮ್ರದ ವಸ್ತುಗಳನ್ನು ತಯಾರಿಸುವವರು, ಲೋಹದ ಕಲಾಕೃತಿಗಳ ಕಲಾವಿದರು, ರಸ್ತೆಬದಿ ಕೀಲಿಗಳ ದುರಸ್ತಿ ಮಾಡುವವರು, ಶಿಲ್ಪಿಗಳು, ಅಕ್ಕಸಾಲಿಗರು, ಕುಂಬಾರರು, ಪಾದರಕ್ಷೆ ದುರಸ್ತಿ ಮಾಡುವವರು, ಪ್ಲಾಸ್ಟರಿಂಗ್ ಮತ್ತು ಇಟ್ಟಿಗೆ ತಯಾರಕರು, ಬುಟ್ಟಿ ನೆಯುವವರು, ಸಾಂಪ್ರದಾಯಿಕ ಆಟಿಕೆ ತಯಾರಕರು, ಕ್ಷೌರಿಕರು, ಹೂಮಾಲೆ ತಯಾರಕರು, ಧೋಬಿಗಳು, ಟೈಲರ್‌ಗಳು, ಮೀನು ಬಲೆ ತಯಾರಕರು ಮುಂತಾದವರು ಈ ಯೋಜನೆಗೆ ಅರ್ಹರಾಗಿರುತ್ತಾರೆ.

ಯೋಜನೆಯ ಮುಖ್ಯ ವೈಶಿಷ್ಟ್ಯಗಳು:

ಈ ಯೋಜನೆ ಸಂಪೂರ್ಣವಾಗಿ ಕೇಂದ್ರ ಸರ್ಕಾರ ಪ್ರಾಯೋಜಿತವಾಗಿದೆ. ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರುವ ಮತ್ತು ಇದುವರೆಗೆ ಯಾವುದೇ ಸಾಲ ಸೌಲಭ್ಯ ಪಡೆಯದ ಕಾರ್ಮಿಕರಿಗೆ ₹3 ಲಕ್ಷವರೆಗೆ ಗ್ಯಾರಂಟಿ ಇಲ್ಲದ (collateral-free) ಸಾಲ ದೊರೆಯುತ್ತದೆ.

  • ಮೊದಲ ಹಂತದಲ್ಲಿ ₹1 ಲಕ್ಷ ಸಾಲ – ಮರುಪಾವತಿ ಅವಧಿ 18 ತಿಂಗಳು
  • ಎರಡನೇ ಹಂತದಲ್ಲಿ ₹2 ಲಕ್ಷ ಸಾಲ – ಮರುಪಾವತಿ ಅವಧಿ 30 ತಿಂಗಳು
  • ಬಡ್ಡಿದರ ಕೇವಲ 5%
  • ಮುಂಚಿತವಾಗಿ ಸಾಲ ತೀರಿಸಿದರೆ ಯಾವುದೇ ದಂಡ ಇಲ್ಲ

ತರಬೇತಿ ಮತ್ತು ಪ್ರೋತ್ಸಾಹಗಳು:

  • 5–7 ದಿನಗಳ ಮೂಲ ತರಬೇತಿ ಮತ್ತು 15 ದಿನಗಳ ಉನ್ನತ ತರಬೇತಿ
  • ತರಬೇತಿ ಅವಧಿಯಲ್ಲಿ ದಿನಕ್ಕೆ ₹500 ಸ್ಟೈಪೆಂಡ್
  • ₹15,000 ಮೌಲ್ಯದ ಟೂಲ್‌ಕಿಟ್ ಸಹಾಯ
  • ಡಿಜಿಟಲ್ ವ್ಯವಹಾರಗಳಿಗೆ ಪ್ರತಿ ಟ್ರಾನ್ಸಾಕ್ಷನ್‌ಗೆ ₹1 (ಗರಿಷ್ಠ 100 ವ್ಯವಹಾರಗಳಿಗೆ)
  • ಮಾರ್ಕೆಟ್ ಬೆಂಬಲ, ಬ್ರಾಂಡಿಂಗ್ ಮತ್ತು ಗುಣಮಟ್ಟ ಪ್ರಮಾಣೀಕರಣ ಸಹಾಯ
  • PM ವಿಶ್ವಕರ್ಮ ಪ್ರಮಾಣಪತ್ರ ಮತ್ತು ಐಡಿ ಕಾರ್ಡ್ ವಿತರಣೆ

ಯೋಜನೆಯ ಪ್ರಯೋಜನಗಳು:

  • ಅಧಿಕೃತ ಪ್ರಮಾಣಪತ್ರ ಮತ್ತು ಗುರುತಿನ ಚೀಟಿ
  • ಉಚಿತ ಕೌಶಲ್ಯ ತರಬೇತಿ
  • ಟೂಲ್‌ಕಿಟ್‌ಗೆ ₹15,000 ಸಹಾಯಧನ
  • ₹3 ಲಕ್ಷವರೆಗೆ ಕಡಿಮೆ ಬಡ್ಡಿದರದಲ್ಲಿ ಸಾಲ

ಅರ್ಜಿ ಸಲ್ಲಿಸುವ ವಿಧಾನ:

  1. ಆನ್‌ಲೈನ್ ಮೂಲಕ:
    ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: https://pmvishwakarma.gov.in/
    ಮೊಬೈಲ್ ಸಂಖ್ಯೆ ಮತ್ತು ಆಧಾರ್ ಬಳಸಿ ಲಾಗಿನ್ ಮಾಡಿ ನೋಂದಣಿ ಮಾಡಬಹುದು.
  2. ಆಫ್‌ಲೈನ್ ಮೂಲಕ:
    ಹತ್ತಿರದ ಕಾಮನ್ ಸರ್ವಿಸ್ ಸೆಂಟರ್ (CSC) ಗೆ ಭೇಟಿ ನೀಡಿ.
    ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ಹೋಗಿ ಅರ್ಜಿ ಸಲ್ಲಿಸಬಹುದು.
PM Vishwakarma
PM vishwakarma

CSC ಕೇಂದ್ರವನ್ನು ಹುಡುಕುವುದು:

  • ವೆಬ್‌ಸೈಟ್: locator.csccloud.in ತೆರೆಯಿರಿ
  • ರಾಜ್ಯ, ಜಿಲ್ಲೆ, ತಾಲ್ಲೂಕು ಆಯ್ಕೆ ಮಾಡಿ
  • ಕ್ಯಾಪ್ಚಾ ನಮೂದಿಸಿ ‘Search’ ಕ್ಲಿಕ್ ಮಾಡಿ

ಬೇಕಾಗುವ ದಾಖಲೆಗಳು (Documents Required)

ಅರ್ಜಿ ಸಲ್ಲಿ ಸಲು ಈ ಪ್ರಮುಖ ದಾಖಲೆಗಳು ನಿಮ್ಮ ಬಳಿ ಇರಬೇ ಕು:

  • ಆಧಾರ್ ಕಾರ್ಡ್ : ಗುರುತಿನ ಚೀ ಟಿ ಮತ್ತು ವೆರಿಫಿಕೇ ಶನ್ಗಾಗಿ ಇದು ಕಡ್ಡಾಯ.
  • ಮೊಬೈಲ್ ಸಂ ಖ್ಯೆ : ಇದು ನಿಮ್ಮ ಆಧಾರ್ ಕಾರ್ಡ್ ಗೆ ಲಿಂ ಕ್ ಆಗಿರಬೇ ಕು.
  • ಬ್ಯಾಂ ಕ್ ಖಾತೆ ವಿವರಗಳು: ಬ್ಯಾಂ ಕ್ ಪಾಸ್ಬುಕ್ ಅಥವಾ ಸ್ಟೇ ಟ್ಮೆಂ ಟ್.
  • ರೇ ಷನ್ ಕಾರ್ಡ್ : ಒಂ ದು ವೇ ಳೆ ರೇ ಷನ್ ಕಾರ್ಡ್ ಇಲ್ಲದಿದ್ದ ರೆ, ಕುಟುಂ ಬದ ಎಲ್ಲಾ ಸದಸ್ಯ ರ

ಮುಖ್ಯ ನಿಯಮಗಳು:

  • ಒಂದು ಕುಟುಂಬದಿಂದ ಒಬ್ಬರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ
  • ಸರ್ಕಾರಿ ನೌಕರರು ಅಥವಾ ಅವರ ಕುಟುಂಬ ಸದಸ್ಯರು ಅರ್ಹರಲ್ಲ
  • ಈಗಾಗಲೇ PMEGP, PM SVANidhi ಅಥವಾ Mudra ಸಾಲ ಪಡೆದವರು ಅರ್ಹರಲ್ಲ (ಸಾಲ ತೀರಿಸಿದರೆ ಮಾತ್ರ ಅರ್ಹತೆ)

ಈ ಯೋಜನೆಯ ಮೂಲಕ ಸಣ್ಣ ಕೌಶಲ್ಯ ಕಾರ್ಮಿಕರು ತಮ್ಮ ಉದ್ಯಮವನ್ನು ಅಭಿವೃದ್ಧಿಪಡಿಸಿ ಹೆಚ್ಚಿನ ಆದಾಯ ಗಳಿಸಲು ಅವಕಾಶ ಪಡೆಯುತ್ತಾರೆ.

Leave a Comment